Powered By Blogger

Monday 11 February 2013

Introduction to Sat-Pramiti (still in writing)

ಸತ್-ಪ್ರಮಿತಿ
ನಮೋ ಮಹದ್ಭ್ಯಃ ನಮೋ ಗುರುಭ್ಯಃ ಸಂಪ್ರದಾಯಕರ್ತೃಭ್ಯಶ್ಚ
“ಅಕಸ್ಮಾದಾಗತೋ ಜನ್ತುಃ ಅಕಸ್ಮಾದೇವ ನಶ್ಯತಿ” ಎಂಬಂತೆ ಹುಟ್ಟು-ಸಾವುಗಳ ನಡುವೆ ಮನುಷ್ಯನ ಜೀವನ. ಜೀವನವೆಂಬುದು ನಿರಂತರ ಪರಿವರ್ತನೆಗೊಳ್ಳುತ್ತಿರುವದು. ಯಾವದೇ ನಿಶ್ಚಿತತೆಯೆಂಬುದಿಲ್ಲ. ಅದರಲ್ಲಿ ಬಾಲ್ಯ-ಕೌಮಾರ-ಯೌವನ-ಮುಪ್ಪುಬರುತ್ತಿರುವವು. ಹಾಗೆಯೇ ದೇಹಾನ್ತರ, ಲೋಕಾನ್ತರಗಳು. ಶೀತೋಷ್ಣ, ಸುಖದುಃಖ, ಲಾಭಾಲಾಭ, ಜಯಾಜಯವೇ ಮುಂತಾದ ದ್ವಂದ್ವಗಳ ತೊಂದರೆ! ಹೀಗಿರುವ ಪ್ರಂಪಂಚದಲ್ಲಿ ನಿಜ-ಸುಳ್ಳು, ಧರ್ಮ-ಅಧರ್ಮ, ವೇದ-ಅವೇದ, ಈ ವಿಚಾರಗಳನ್ನು ಕುರಿತು ಸತ್-ಪ್ರಮಿತಿ(ಸರಿಯಾದ ಜ್ಞಾನ)ಯನ್ನು ಉಂಟುಮಾಡಿಕೊಳ್ಳುವದು ನಮ್ಮಗುರಿಯಾಗಬೇಕು.
ಸತ್ ಎಂದರೆ ಯಾವರೂಪದಿಂದ ಯಾವದು ನಿಶ್ಚಿತವಾಗಿದೆಯೋ ಅದು ಬದಲಾಗದಿದ್ದರೆ ಸತ್ಯ; ಬದಲಾದರೆ ಅಸತ್ಯ. ಪ್ರಮಿತಿ ಎಂದರೆ ಜ್ಞಾನ-ತಿಳಿವು. ಶಾಸ್ತ್ರಾ(ವೇದಾ)ರ್ಥದ ಪಾಂಡಿತ್ಯ. ಆತ್ಮನನ್ನು ಅನುಭವಪೂರ್ವಕವಾಗಿ ತಿಳಿದುಕೊಂಡಿರುವದು. ಕಾಲದೇಶಾದಿಭೇದದಿಂದ ಬದಲಾಗದ ನಿತ್ಯವಾದ ಜ್ಞಾನ ಸತ್-ಪ್ರಮಿತಿ.
ಹಾಗಾದರೆ ನಾವು ವ್ಯವಹರಿಸುತ್ತಿರುವದೇನು? ಸತ್ತೋ ಅಸತ್ತೋ ? ಸರಿಯಾದಜ್ಞಾನ ಯಾವದು? ಅದು ಯಾವದರಿಂದ ದೊರೆಯುತ್ತದೆ? ಆ ಕುರಿತು ಚರ್ಚೆ, ವಿಚಾರವಿನಿಮಯವೇ ಉದ್ದೇಶ.